ಅಯಟೋಲಿಯ ಒಕ್ಕೂಟ

ಅಯಟೋಲಿಯದಲ್ಲಿನ ಪಂಗಡಗಳೆಲ್ಲ ಕ್ರಿ.ಶ. 4ನೆಯ ಶತಮಾನದ ಪ್ರಾರಂಭದಲ್ಲಿ ಸ್ಥಾಪಿಸಿದ ಕೂಟಸಂಸ್ಥೆ. ಈ ಹಿಂದೆ ಇಲ್ಲಿದ್ದ ಗುಂಪುಗಳ ಮಧ್ಯೆ ಒಗ್ಗಟ್ಟಾಗಲಿ ರಾಜಕೀಯ ವ್ಯವಸ್ಥೆಯಾಗಲಿ ಇಲ್ಲದ್ದರಿಂದ ದೇಶದ ಅಭಿವೃದ್ಧಿ ಕುಂಠಿತವಾಗಿತ್ತಲ್ಲದೆ ಶತ್ರುಭಯ ಅಪಾರವಾಗಿತ್ತು. ಒಕ್ಕೂಟದ ಸಂವಿಧಾನದ ಪ್ರಕಾರ ಅಸ್ತಿತ್ವಕ್ಕೆ ಬಂದ ಮುಖ್ಯ ವಿಧಾಯಕ ಸಭೆಗೆ ಕಾನೂನುಗಳನ್ನು ರಚಿಸುವ ಆಡಳಿತಾಧಿಕಾರಿಗಳನ್ನು ಆರಿಸುವ ಹಾಗೂ ವಿದೇಶಾಂಗ ನೀತಿಯನ್ನು ರೂಪಿಸುವ ಅಧಿಕಾರವಿತ್ತು. ಎಲ್ಲ ಗುಂಪುಗಳ ಮುಖಂಡರನ್ನೊಳಗೊಂಡ ಮತ್ತೊಂದು ವಿಧಾಯಕ ಸಭೆಯೂ ಇತ್ತು. ಅಲ್ಲದೆ 30 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯೊಂದು ಪ್ರಮುಖ ಸಮಸ್ಯೆಗಳನ್ನು ಮೇಲ್ಕಂಡ ಸಭೆಗಳ ಗಮನಕ್ಕೆ ತರುವ ಕಾರ್ಯದಲ್ಲಿ ನಿರತವಾಗಿತ್ತು.

	ಈ ಒಕ್ಕೂಟದ ಪರಿಣಾಮವಾಗಿ ಅಯಟೋಲಿಯದ ಬಲ ಸಂವರ್ಧನೆಯಾಯಿತು. ಅದು ಕ್ರಿ.ಪೂ. 279ರ ಸುಮಾರಿನಲ್ಲಿ ಕೆಲ್ವರ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿತಲ್ಲದೆ ಬಯೋಷಿಯ, ದಕ್ಷಿಣ ಥೆಸಲಿ, ಎಪಿರಸ್ ಪ್ರದೇಶಗಳ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿತು. ಕ್ರಿ.ಪೂ.220ssರಲ್ಲಿ ಅಥೀನಿಯ ಒಕ್ಕೂಟ ಹಾಗೂ ಮ್ಯಾಸಿಡೋನಿಯಗಳಿಂದ ಪರಾಜಯಗೊಂಡರೂ ರೋಮನ್ನರೊಡಗೂಡಿ ಮ್ಯಾಸಿಡೋನಿಂiÀiವನ್ನು ಯುದ್ಧದಲ್ಲಿ ಪರಾಜಯಗೊಳಿಸಿತು. ಆದರೆ ಕ್ರಿ.ಪೂ.192ರಲ್ಲಿ ಸಿರಿಯದೊಡನೆ ಸೇರಿ ರೋಮನ್ನರನ್ನು ವಿರೋಧಿಸಿತು. ಅಯಟೋಲಿಯ, ಸಿರಿಯ ಸೋತವು. ಒಕ್ಕೂಟ ನಿರ್ನಾಮವಾಗಿ ಅಯಟೋಲಿಯ ರೋಮನ್ ಸಾಮ್ರಾಜ್ಯದಲ್ಲಿ ಸೇರಿಹೋಯಿತು.

	ಈಗ ಅಯಟೋಲಿಯ ಪ್ರದೇಶಕ್ಕೆ ಅಕರ್ನಾನಿಯ ಸೇರಿದೆ.					
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ